ಶ್ರೀಪಾದ ರಘುನಾಥ ಕುಲಕರ್ಣಿ
ಇದು ಯಾವ ಜನ್ಮದ ಶಾಪವೋ? ದೃಷ್ಟಿ ದೋಷವೋ? ಮಾಟ-ಮಂತ್ರ ಪ್ರಯೋಗವೋ? ಮಾನಸಿಕ ಆಘಾತವೋ? ಯೋಚಿಸಿದಷ್ಟು ನಿಗೂಢವಾಗುವ ಸಮಸ್ಯೆಗಳು ಮುಂದೇನು ಎಂಬ ಪ್ರಶ್ನೆ ಹಗಲಿರುಳು ಕಾಡುತ್ತದೆ.
ದೈವೇಚ್ಚೆಯಾಗಿರಬಹುದೇ?-ಎಂದು ಯೋಚಿಸಿದರೂ ಎಲ್ಲ ಸಮಸ್ಯೆಗಳಿಗೆ ಅದೇ ಕಾರಣವಾಗುವುದಿಲ್ಲಿ. ನಿಮ್ಮ ಸುತ್ತಮುತ್ತಲಿರುವ, ಸಂಬಂಧಿಕರ ಅಸೂಯೆ, ಮಾತ್ಸರ್ಯ, ಅಸಹನೆ, ಸ್ವಾರ್ಥ, ಪೈಪೋಟಿ ಹೀಗೆ ನಿಮಗೆ ಗೊತ್ತಿಲ್ಲದಂತಹ ಹಲವು ಕುಶಕ್ತಿಗಳು ಈ ತೊಂದರೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಪ್ರಜ್ಞಾ ಪೂರ್ವಕವಾಗಿಯೋ ಅಥವಾ ಇನ್ನಾವುದೋ ಕಾರಣಗಳಿಂದ ಅವರು ನಿಮ್ಮ ಪ್ರಗತಿ, ಸಂತೋಷ, ಅಂತಸ್ತು, ಸಂಪತ್ತುಗಳಿಗೆ ಕಂಟಕರಾಗುತ್ತಾರೆ.
ಈ ನಿಮ್ಮ ಎಲ್ಲ ಅನುಭವಕ್ಕೆ ಉತ್ತರ ನಿಮ್ಮ ಜನ್ಮ ಕುಂಡಲಿಯಲ್ಲಿಯೇ ಇದೆ. ಯಾವ ಪ್ರಕಾರದ ಬಾಧೆಗೆ ನೀವು ಈಡಾಗಿದ್ದೀರಿ, ಅದರಿಂದ ಯಾವ ರೀತಿ ಮುಕ್ತರಾಗಬೇಕು ಮತ್ತು ಯಾವ ಸಮಸ್ಯೆಗೆ ಯಾವ ಪರಿಹಾರ ಎನ್ನುವುದನ್ನು ಈ ಕಿರು ಗ್ರಂಥದಲ್ಲಿ ವಿವರಿಸಲಾಗಿದೆ...
ಜ್ಯೋತಿಷ್ಯದ ಆಳ-ಅರಿವುಗಳನ್ನು ಅರಿತು, ಜೀವನದಲ್ಲಿ ಅಳವಡಿಸಿಕೊಂಡು ಅರ್ಥಪೂರ್ಣ ಬಾಳಿಗೆ ನಾಂದಿಯಾಗಬೇಕೆಂಬುದೇ ಈ ಗ್ರಂಥದ ಉದ್ದೇಶ...
ಶಾಪ ದೋಷ ಪರಿಹಾರ ಪ್ರಕಾಶ / Shapa Dhosha Parihara Prakasha
ಲೇಖಕರು
ಶ್ರೀಪಾದ ರಘುನಾಥ ಕುಲಕರ್ಣಿ
ಪ್ರಕಾಶಕರು
ಶ್ರೀನಿಧಿ ಪಬ್ಲಿಕೇಶನ್ಸ್
ಪುಟಗಳು
152