ವಿದ್ಯಾ ನವೀನ್
* ಸಂಪ್ರದಾಯ ಎಂಬುದು ಇತ್ತೀಚೆಗೆ ಬಂದುದೇನಲ್ಲ. ಹಿಂದಿನ ಕಾಲದಿಂದಲೂ ಹಿರಿಯರು ಆಚರಿಸಿಕೊಂಡು ಬಂದ ಅರ್ಥಪೂರ್ಣ ಧಾರ್ಮಿಕ ಪದ್ಧತಿ.
* ಪ್ರತಿಯೊಬ್ಬ ಮನುಷ್ಯನ ಬದುಕು ನಂಬಿಕೆಯ ಮೇಲೆ ನಿಂತಿರುತ್ತದೆ. ಧಾರ್ಮಿಕ ಆಚರಣೆಯಲ್ಲಿ ಸಂಪ್ರದಾಯಗಳಲ್ಲಿ ನಂಬಿಕೆ ಇರುವುದು ಬಹಳ ಮುಖ್ಯ. ಸಂಪ್ರದಾಯಗಳು ಹಿರಿಯರಿಂದ, ಅವರಿಗಾದ ಅನುಭವಗಳಿಂದ ಹುಟ್ಟಿದವು. ಅವುಗಳನ್ನು ಮೂಢನಂಬಿಕೆಗಳು ಎಂದರೆ ಎಲ್ಲವೂ ಶೂನ್ಯವಾಗುತ್ತದೆ.
* ನಂಬಿಕೆಯಲ್ಲಿ ಯಾವ ತೊಂದರೆಯೂ ಇಲ್ಲ. ಒಬ್ಬರಿಗೆ ಒಂದು ವಿಚಾರದಲ್ಲಿ ನಂಬಿಕೆ ಇದ್ದರೆ ಅದೇ ವಿಚಾರದಲ್ಲಿ ಮತ್ತೊಬ್ಬನಿಗೆ ಮೂಢನಂಬಿಕೆ ಎನಿಸಬಹುದು. ಒಬ್ಬನು ದೇವರ ಪೂಜೆ ಒಳ್ಳೆಯದು ಎಂದರೆ ಇನ್ನೊಬ್ಬನು ಅದು ಕೇವಲ ಮೂಢನಂಬಿಕೆ ಎನ್ನುತ್ತಾನೆ.
* ನಂಬಿಕೆಯಿಂದಾಗಲಿ ಮೂಢನಂಬಿಕೆಯಿಂದಾಗಲಿ ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯ ಹಾಗೂ ಆಚರಣೆಗಳು ಒಳ್ಳೆಯದೇ ಹೊರತು ಕೆಟ್ಟದ್ದೇನಲ್ಲ. ಅದು ಮೇಲ್ನೋಟಕ್ಕೆ ಬಾಲಿಶ್ಯವೋ, ಮೌಡ್ಯವೋ, ಹಾಸ್ಯಾಸ್ಪದವೋ ಎಂದೆನಿಸಿದರೂ ಆಳವಾಗಿ ಚಿಂತಿಸಿದಾಗ, ಅದರ ಮೂಲ ಉದ್ದಾಶವನ್ನು ತಿಳಿದಾಗ ಅದೇ ಆಚಾರವಿಚಾರಗಳು ಮಹತ್ವದ್ದೆನಿಸುತ್ತದೆ.
* ಸಂಪ್ರದಾಯಗಳ ಹಿಂದಿನ ಧನಾತ್ಮಕ, ಸಕಾರಾತ್ಮಕ, ಮೌಲ್ಯಯುತ ಕಾರಣಗಳನ್ನು ಅರಿತುಕೊಳ್ಳುವುದೇ ಬಹಳ ಮುಖ್ಯವಾಗಿರುವುದರಿಂದ ಅವುಗಳಿಂದ ದೊರೆಯುವ ಫಲಿತಾಂಶಗಳ ಬಗ್ಗೆ ಗ್ರಹಿಸುವುದು ಮುಖ್ಯ. ನಂಬಿಕೆಗಳು-ಸಂಪ್ರದಾಯಗಳು ಕೇವಲ ಅತಿರೇಕವೇನಲ್ಲ. ಅವುಗಳಲ್ಲಿ ಅಡಗಿರುವ ಒಳ್ಳೆಯ ಉದ್ದೇಶಗಳನ್ನು ಅರಿತುಕೊಳ್ಳಬೇಕಷ್ಟೇ...
ಸಂಪ್ರದಾಯಗಳೆಲ್ಲ ಮೂಢನಂಬಿಕೆಗಳಲ್ಲ / Sampradayagalella Moodamanbikegalalla
ಲೇಖಕರು
ವಿದ್ಯಾ ನವೀನ್
ಪ್ರಕಾಶಕರು
ಚಿನ್ಮಯ ಪ್ರಕಾಶನ
ಪುಟಗಳು
200